ಹಾಸನಕ್ಕೆ ಬಂದಿದ್ದ ರಾಜಶೇಖರ ರೆಡಿ

ಹಾಸನ : ಅಂಧ್ರ ಪ್ರದೇಶದ ಮುಖ್ಯ ಮಂತ್ರಿ ವೈ. ಎಸ್‌. ರಾಜಶೇಖರರೆಡ್ಡಿ ಹಾಗೂ ಹಾಸನಕ್ಕೂ ಸಂಬಂಧ ಇತ್ತೆಂದರೆ ಆಶ್ಚರ್ಯವಲ್ಲವೇ? ಹಾಸನ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಹೆಚ್‌.ಟಿ. ಅಣ್ಣಾಜಿಯವರಿಗೆ ರೆಡ್ಡಿಯವರೊಂದಿಗೆ ಸ್ನೇಹ ಇತ್ತು. ರೆಡ್ಡಿಯವರು ಹಾಸನಕ್ಕೆ ಹಲವು ಬಾರಿ ಬಂದಿದ್ದರಂತೆ. ಬಂದಾಗ ಅಣ್ಣಾಜಿಯವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿ ಹೋಗುತ್ತಿದ್ದರು. ರಾಜ್ಯದ ಹಲವು ಕಡೆ ವ್ಯಾಪಾ ರೋದ್ಯಮದಲ್ಲಿ ರೆಡ್ಡಿಯವರ ಪಾಲು ದಾರಿಕೆ ಇದೆ....

ಕಲುಷಿತ ನೀರು ಸೇವನೆಗೆ ೨ ಬಲಿ

ಹಾಸನ : ಕಲುಷಿತ ನೀರು ಸೇವಿಸಿ, ಅಸ್ವಸ್ಥಗೊಂಡಿದ್ದ ಗಂಡಸಿ ಹೋಬಳಿಯ ಹೊನ್ನಕುಮಾರನಹಳ್ಳಿ ಗ್ರಾಮಸ್ಥರ ಪೈಕಿ ಇಬ್ಬರು ಗುರುವಾರ ಸಾವನ್ನಪ್ಪಿದ್ದಾರೆ. ಗಿಡ್ಡಯ್ಯ (೬೦) ಹಾಗೂ ರೇಣುಕಾ (೫೫) ಇವರೇ ಸಾವನ್ನಪ್ಪಿದ ದುರ್ದೈವಿಗಳು. ೧೫ಕ್ಕೂ ಹೆಚ್ಚು ಮಂದಿ ಅಸ್ವಸ್ಥ ರಾಗಿದ್ದು, ಅವರು ನಗರದ ಜಯ ಚಾಮ ರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಅಸ್ವಸ್ಥರನ್ನು ಸುದ್ದಿಗಾರರು ಭೇಟಿ ಯಾದಾಗ, ನೀರು ಸರಬರಾಜಾ ಗುವ...

ಹಾಸನ ತಾ.ಪಂ. ಅಧ್ಯಕ್ಷರಾಗಿ ವಸಂತ ಶಂಕರನಾಯಕ್‌-ಉಪಾಧ್ಯಕ್ಷೆ ಪ್ರೇಮಾ ರಮೇಶ್‌

ಹಾಸನ :ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಯಲಗುಂದ ಕ್ಷೇತ್ರ ವಸಂತ ಶಂಕರ ನಾಯಕ್‌ ಹಾಗೂ ಕೌಶಿಕ ಕ್ಷೇತ್ರ ಪ್ರೇಮಾ ರಮೇಶ್‌ ಅವಿರೋಧವಾಗಿ ಆಯ್ಕೆಗೊಂಡರು. ಮೂರನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರು ವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಸಂತ ಶಂಕರನಾಯಕ್‌ ಹಾಗೂ ಪ್ರೇಮಾ ರಮೇಶ್‌ ಅವರು ಮಾತ್ರ ನಾಮಪತ್ರ...

ಜಿಲ್ಲೆಯಲ್ಲಿ ಅತಿವೃಷ್ಟಿ-ಬರ : ಆನಂದ್‌ ಅಧ್ಯಯನ ಆರಂಭ

ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಈ ಹಿನ್ನಲೆ ಯಲ್ಲಿ ಕ್ರೀಡಾಪಟುಗಳ ದಶಕದ ಕನಸು ಈಗ ನನಸಾಗುತ್ತಿದೆ. ಒಳಾಂಗಣ ಕ್ರೀಡಾಂಗಣಕ್ಕೆ ೪.೫೫ ಕೋಟಿ ರೂ. ವೆಚ್ಚದಲ್ಲಿ ಯೋಜನೆ ತಯಾರಿಸಲಾಗಿದೆ. ರಾಜ್ಯ ಸರ್ಕಾರ ೨ ಕೋಟಿ ರೂ. ಆರ್ಥಿಕ ನೆರವನ್ನು ಒದ ಗಿಸಿದೆ. ನಗರಸಭೆ ೧ ಕೋಟಿ ರೂ.ಗಳನ್ನು ನೀಡಿದೆ. ಈ ಕನಸು ನನಸಾಗಲು ಶಾಸಕ ಹೆಚ್‌.ಎಸ್‌.ಪ್ರಕಾಶ್‌ ಅವರು ಶ್ರಮ ವಹಿಸಿದರು. ಒಳಾಂಗಣ ಕ್ರೀಡಾಂಗಣ...

ನಗರದ ಕ್ರೀಡಾಪಟುಗಳ ದಶಕದ ಕನಸು ಈಗ ನನಸು

ಹಾಸನ : ಹಾಸನವೆಂದರೆ ಬರೀ ರಾಜಕೀಯ, ಪುಢಾರಿಗಳ ಆಟಾ ಟೋಪ ನಗರ ಎಂದೆಲ್ಲಾ ಹೀಯಾ ಳಿಸುವವರು ಇದ್ದಾರೆ. ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳ ಪೂರಕ ವಾತಾ ವರಣ ಸೃಷ್ಠಿ ಆಗಲೇ ಇಲ್ಲ ಎಂದು ಹಿರಿಯ ನಾಗರಿಕರು ಹೇಳುತ್ತಲೇ ಇದ್ದಾರೆ!. ಹೌದು..! ಹಾಸನದಲ್ಲಿ ಇವತ್ತಿಗೂ ಕ್ರೀಡೆಗೆ ಪ್ರೋತ್ಸಾಹ ಕಡಿಮೆಯೇ? ಅದು ಇರಲಿ! ಇಲ್ಲಿನ ಕ್ರೀಡಾಪಟುಗಳು ರಾಜ್ಯ, ಅಂತರರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಆದರೆ...

ಮಿತಿಮೀರಿದ ತಂಬಾಕು : ಬೆಳೆಗಾರರಿಗೆ ಬೆಲೆಯದೇ ಚಿಂತೆ -ರಾಮನಾಥಪುರ ಮಾರುಕಟ್ಟೆ ಆರಂಭ

ಹಾಸನ : ಈ ವರ್ಷ ಜಿಲ್ಲೆಯ ತಂಬಾಕು ಉತ್ಪಾದನೆಯಲ್ಲಿ ಹೆಚ್ಚಳ ಕಂಡಿದ್ದು, ಮಾರುಕಟ್ಟೆ ಏನಾಗಬಹುದೆನ್ನುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ. ಆಂಧ್ರ ಮಾರುಕಟ್ಟೆ ಮಾದರಿ ಆರಂಭದಲ್ಲಿ ಉತ್ತಮ ಬೆಲೆ ದೊರಕಿ, ಕ್ರಮೇಣ ಕುಸಿದ ಸ್ಥಿತಿ ಉಂಟಾಗು ವುದೇ? ಎನ್ನುವ ದಿಗಿಲು ಮನೆ ಮಾಡಿದೆ. ಕಳೆದ ವರ್ಷಕ್ಕಿಂತ ಬೆಳೆ ಈ ಬಾರಿಗುಣಮಟ್ಟದಲ್ಲಿ ಉತ್ತಮವಾಗಿರುವುದು ರೈತರಲ್ಲಿ ಹರ್ಷ ಮೂಡಿಸಿದೆ. ಅದರ ಆಧಾರದ ಮೇಲಾದರೂ ಅತ್ಯುತ್ತಮ ಬೆಲೆ ಸಿಗಬಹುದೆಂಬ...

ಅಂಗಮಾರಿಯಿಂದ ಇಳುವರಿ ಕಡಿಮೆ :ಈ ವರ್ಷ ಆಲೂಗೆಡ್ಡೆ ವಹಿವಾಟು ಕುಸಿತ

ಹಾಸನ : ಅಂಗಮಾರಿ ರೋಗವು ಆಲೂಗೆಡ್ಡೆ ಬೆಳೆಗಾರರನ್ನೇ ಆಹುತಿಗೆ ತೆಗೆದುಕೊಂಡಿದೆ. ಈಗ ಈ ರೋಗ ದಿಂದ ಇಳುವರಿ ಕಡಿಮೆಯಾಗಿದೆ. ಹಾಗಾಗಿ ಈ ವರ್ಷ ಆಲೂಗೆಡ್ಡೆ ವಹಿ ವಾಟು ಸಂಪೂರ್ಣ ಕುಸಿಯಲಿದೆ. ಪ್ರತಿ ವರ್ಷ ಜಿಲ್ಲೆಯಲ್ಲಿ ೧ ಲಕ್ಷ ಎಕರೆ ಪ್ರದೇಶಕ್ಕೂ ಹೆಚ್ಚು ಆಲೂಗೆಡ್ಡೆ ಬಿತ್ತನೆ ಮಾಡಲಾಗುತ್ತಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಳೆಗೆ ಅಂಗ ಮಾರಿ ತಗುಲಿಕೊಂಡಿರುವುದರಿಂದ ಕೇವಲ ೪೫ ಸಾವಿರ ಎಕರೆ ಪ್ರದೇಶದಲ್ಲಿ...

ಬೇಡಿಕೆಗೆ ಒತ್ತಾಯಿಸಿ ಅಂಗವಿಕಲರ ಧರಣಿ

ಹಾಸನ: ವಿವಿಧ ಬೇಡಿಕೆ ಈಡೇ ರಿಕೆಗೆ ಒತ್ತಾಯಿಸಿ ಅಂಗವಿಕಲರ ಅಭಿ ಮಾನಿ ಪರಿಷತ್‌ ಆಶ್ರಯದಲ್ಲಿ ಮಂಗಳ ವಾರ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಅಂಗವಿಕಲರು ಧರಣಿ ನಡೆಸಿದರು. ಬೆಳಿಗ್ಗೆ ೧೧-೩೦ರ ವೇಳೆಯಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಅರ್ಧ ಗಂಟೆಗೂ ಹೆಚ್ಚು ವೇಳೆ ಧರಣಿ ನಡೆಸಿದ ನಂತರ ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕರಿಗೆ ಈ ಕುರಿತು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಧರಣಿನಿರತರು,...

ಆನೆ ಹಾವಳಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಕಾಲ್ನಡಿಗೆ ಜಾಥಾ-ರಸ್ತೆತಡೆ

ಆಲೂರು : ಆನೆ ಹಾವಳಿಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಮಗ್ಗೆ-ರಾಯರಕೊಪ್ಪಲು ಸುತ್ತಮುತ್ತಲ ಗ್ರಾಮಸ್ಥರು ಹಾಗೂ ವಿವಿಧ ಸಂಘ ಟನೆಗಳ ಕಾರ್ಯಕರ್ತರು ಮಂಗಳವಾರ ರಾಯರಕೊಪ್ಪಲಿನಿಂದ ಮಗ್ಗೆವರೆಗೆ ಸುಮಾರು ಒಂದೂವರೆ ಕಿ.ಮೀ. ದೂರ ಕಾಲ್ನಡಿಗೆ ಜಾಥಾ ನಡೆಸಿ, ಮಗ್ಗೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆತಡೆ ನಡೆಸಿದರು. ಪ್ರತಿಭಟನೆಯಲ್ಲಿ ಇನ್ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ರಸ್ತೆ ತಡೆಯಿಂದಾಗಿ ಆ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಪ್ರತಿಭಟನೆಗೂ...

೪ ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ :ಶಾಸಕ ಪ್ರಕಾಶ್‌

ಹಾಸನ: ನಗರದಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ನಿರ್ಮಿಸ ಲಾಗುವುದು ಎಂದು ಶಾಸಕ ಹೆಚ್‌.ಎಸ್‌.ಪ್ರಕಾಶ್‌ ತಿಳಿಸಿದರು. ಮಂಗಳವಾರ ಜಿಲ್ಲಾ ಕ್ರೀಡಾಂಗಣ ದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ರಾಮೀಣ ಹಾಗೂ ದಸರಾ ಕ್ರೀಡಾಕೂಟದ ಉದ್ಘಾ ಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಒಳಾಂಗಣ ಕ್ರೀಡಾಂಗಣಕ್ಕೆ ಈಗಾ ಗಲೇ ೨ ಕೋಟಿ ರೂ. ಬಿಡುಗಡೆಯಾಗಿದೆ. ಉಳಿದ ೨ ಕೋಟಿ ರೂ.ಗಳನ್ನು ಮ್ಯಾಚಿಂಗ್‌...

ಕೋಕಾ ಕಾಯ್ದೆ : ರಾಜ್ಯಪಾಲರ ಅಂಕಿತ ಬಾಕಿ

ಹಾಸನ : ಭಯೋತ್ಪಾದಕರ ನಿಗ್ರಹಕ್ಕೆ ಸಂಬಂಧಿಸಿದಂತೆ ಕೋಕಾ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಉಭಯ ಸದನಗಳಲ್ಲಿಯೂ ಸಮ್ಮತಿ ಯಾಗಿದೆ. ರಾಜ್ಯಪಾಲರ ಅಂಕಿತ ಮಾತ್ರ ಬಾಕಿ ಇದೆ ಎಂದು ರಾಜ್ಯದ ಗೃಹ ಸಚಿವ ಡಾ।। ವಿ.ಎಸ್‌.ಆಚಾರ್ಯ ತಿಳಿಸಿದರು. ಮಂಗಳವಾರ ಪ್ರವಾಸಿ ಮಂದಿರ ದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಅಂಕಿತದ ನಂತರ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು. ಈ ಹಿನ್ನಲೆಯಲ್ಲಿ ಶೀಘ್ರವೇ...

ಬಿ.ಆರ್‌.ಗುರುದೇವ್‌ ಸ್ಥಾನಕ್ಕೆ ಕುತ್ತು ಸಾಧ್ಯತೆ?

ಹಾಸನ : ವಿಧಾನ ಪರಿಷತ್‌ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿ ರುವ ಸಚಿವ ಸೋಮಣ್ಣ ಅವರನ್ನು ಸಚಿವ ಸ್ಥಾನದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಮುಂದುವರೆದಿದೆ. ಈ ಹಿನ್ನಲೆ ಯಲ್ಲಿ ವಿಧಾನ ಪರಿಷತ್‌ ಸದಸ್ಯ ಬಿ.ಆರ್‌.ಗುರುದೇವ್‌ ಸ್ಥಾನಕ್ಕೆ ಗಾಳ ಹಾಕಲು ಬಿ.ಜೆ.ಪಿ. ತೀವ್ರವಾಗಿ ಪ್ರಯತ್ನ ನಡೆಸುತ್ತಿದೆ. ಭಾರತೀಯ ಜನತಾ ಪಕ್ಷ ಆಪ ರೇಷನ್‌ ಕಮಲವನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಹೊರಗೆ ನಡೆಸುತ್ತಿತ್ತು. ಈಗ ವಿಧಾನ...

ಮುಖ್ಯಮಂತ್ರಿ ಯಡಿಯೂರಪ್ಪ ದರ್ಪದ ಮಾತು : ರೇವಣ್ಣ ಆಕ್ರೋಶ

ಹಾಸನ : ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಮುಖ್ಯಮಂತ್ರಿ ಯಡಿ ಯೂರಪ್ಪ ಅವರು ಕಾಳಜಿ ವಹಿಸ ಬೇಕಿಲ್ಲ. ಆದರೆ ಮುಖ್ಯಮಂತ್ರಿಗಳ ಆರೋಗ್ಯವನ್ನು ಸೆ.೯ರಂದು ನಡೆಯ ಲಿರುವ ವಿಧಾನಸಭೆ ಅಧಿವೇಶನದಲ್ಲಿ ಹೇಗೆ ವಿಚಾರಿಸಬೇಕು ಎಂಬುದು ಗೊತ್ತಿದೆ ಎಂದು ಜೆ.ಡಿ.ಎಸ್‌. ನಾಯಕ ಹೆಚ್‌.ಡಿ.ರೇವಣ್ಣ ಮಾರ್ಮಿಕವಾಗಿ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ನಡೆದ ಕ್ಷೇತ್ರದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡು ತ್ತಿದ್ದರು. ರಾಮನಗರಕ್ಕೆ ಅನುದಾನ...

ಅತಿವೃಷ್ಟಿ-ಅನಾವೃಷ್ಟಿಯಿಂದ ತತ್ತರಿಸಿದ ಹಾಸನ ಜಿಲ್ಲೆ :ಮುಗಿಲು ಮುಟ್ಟಿದ ರೈತರ ಗೋಳು

ಹಾಸನ : ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿರುವ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಈ ಬಾರಿಯೂ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತಾಪಿ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿ ಕೊಂಡಿದೆ. ಸಕಲೇಶಪುರ, ಬೇಲೂರು, ಹಾಸನ ತಾಲ್ಲೂಕುಗಳಲ್ಲಿ ಅತಿಯಾದ ಮಳೆ ಯಿಂದ ಬೆಳೆ ಹಾಗೂ ಆಸ್ತಿಪಾಸ್ತಿಗೆ ನಷ್ಟವಾಗಿದ್ದರೆ, ಅರಸೀಕೆರೆ, ಚನ್ನರಾಯ ಪಟ್ಟಣ ತಾಲ್ಲೂಕುಗಳಲ್ಲಿ ಬರದಿಂದ ಬೆಳೆ ಹಾಳಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿ ಯೂರಪ್ಪ...

ಜಿಲ್ಲೆಯ ಸರ್ವಾಂಗೀಣ ಅಭಿವೃದಿಟಛಿಗೆ ಪ್ರಾಮಾಣಿಕ ಪ್ರಯತ್ನ

ಹಾಸನ: ಹಾಸನ ಜಿಲ್ಲೆಯ ಸರ್ವಾಂಗೀಣ ಅಭಿವೃದಿಟಛಿಗೆ ಪ್ರಯತ್ನ ನಡೆಸಲಾಗುವುದು ಎಂದು ಜೆ.ಡಿ.ಎಸ್‌. ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್‌.ಡಿ.ದೇವೇಗೌಡ ಸೋಮ ವಾರ ತಿಳಿಸಿದರು. ಅವರು ಸಂಸದರಾಗಿ ಚುನಾಯಿತ ರಾದ ನಂತರ ಇದೇ ಮೊದಲ ಬಾರಿಗೆ ಮೂರು ದಿನಗಳ ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು, ಬೇಲೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಹಾಸನ ಜಿಲ್ಲೆಯ ವ್ಯಾಪ್ತಿಗೆ ಸೇರುವ ೮ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಭಿ ವೃದಿಟಛಿ...

ಸೆ.೧೫ರಿಂದ ಎಲ್ಲಾ ಗ್ರಾ.ಪಂ.ಗಳಿಗೆ ಭೇಟಿ :ದೇವೇಗೌಡ

ಸಕಲೇಶಪುರ : ಸೆ.೧೫ರಿಂದ ತಾಲ್ಲೂಕಿ ನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಜನರ ದುಃಖ ದುಮ್ಮಾನ ವನ್ನು ಆಲಿಸಲಾಗುವುದು ಎಂದು ಸಂಸದ ಹೆಚ್‌.ಡಿ.ದೇವೇಗೌಡ ತಿಳಿಸಿದರು. ಅವರು ಸೋಮವಾರ ಪಟ್ಟಣದ ಗುರುವೇಗೌಡರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯ ಕ್ರಮದಲ್ಲಿ ಮಾತನಾಡಿ, ಜನತಾ ದರ್ಶನ ದಂತಹ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಕನಿಷ್ಠ ೨ ಗಂಟೆ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳ ಸದಸ್ಯರು ಹಾಗೂ ಜನರೊಂದಿಗೆ...

ಎರಡು ಗುಂಪಿನ ನಡುವೆ ಮಾರಾಮಾರಿ : ಕಲ್ಲು ತೂರಾಟ

ಹೊಳೆನರಸೀಪುರ : ಗಣಪತಿ ಕಾರ್ಯಕ್ರಮದ ವೇಳೆ ಎರಡು ಗುಂಪಿನ ಯುವಕರು ಕ್ಷುಲ್ಲಕ ವಿಚಾರವೊಂದಕ್ಕೆ ಮಾರಕಾಸ್ತ್ರಗಳೊಂದಿಗೆ ಬೀದಿಗಿಳಿದು ಮಾರಾಮಾರಿ ನಡೆಸಿದ ಘಟನೆ ಪಟ್ಟಣ ದಲ್ಲಿ ನಡೆದಿದೆ. ಇದೇ ವೇಳೆ ಕಲ್ಲು ತೂರಾಟ ನಡೆದು, ಮನೆಗಳಿಗೆ ಹಾನಿ ಯಾಗಿದೆ. ಪಟ್ಟಣದ ಕೋಟೆ ವೃತ್ತದ ಬಳಿ ಎಲ್‌.ಎಲ್‌.ಎನ್‌. ಯುವಕರ ಸಂಘ ಪ್ರತಿಷ್ಠಾಪಿಸಿದ್ದ ಗಣಪತಿ ವೇದಿಕೆಯಲ್ಲಿ ಭಾನುವಾರ ರಾತ್ರಿ ಆರ್ಕೆಸ್ಟ್ರಾವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಯುವಕರ ಗುಂಪೊಂದು ಹಾಡೊಂದಕ್ಕೆ...

ಅಧಿಕಾರಿಗಳ ತಪ್ಪು ಮಾಹಿತಿಗೆ ಉಸ್ತುವಾರಿ ಕಾರ್ಯದರ್ಶಿ ಗರಂ

ಹಾಸನ : ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸದಿರು ವುದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯ ದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಉಮೇಶ್‌ ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣ ದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆ ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಉದ್ಯೋಗ ಖಾತ್ರಿ ಯೋಜನೆ...

ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ : ಕಾಟ್ವೆ

ಹಾಸನ : ಎಲ್ಲಾ ಸಮಾಜದವ ರನ್ನು ಗುರುತಿಸಿ, ಬೆಳೆಸಲು ಒಳ ಮೀಸ ಲಾತಿ ಅತ್ಯವಶ್ಯಕ. ಜನಸಂಖ್ಯೆಯ ಆಧಾರದ ಮೇಲೆ ಒಳ ಮೀಸಲಾತಿ ನೀಡ ಬೇಕು. ಇದರಿಂದ ಹಿಂದುಳಿದಿರುವ ಅತ್ಯಂತ ಕನಿಷ್ಠ ಜನರಿಗೂ ಸರ್ಕಾರದ ಸೌಲಭ್ಯಗಳು ದೊರೆಯುತ್ತವೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗ ಗಳ ಅಭಿ ವೃದಿಟಛಿ ಅಧ್ಯಕ್ಷ ಅಶೋಕ್‌ ಕಾಟ್ವೆ ಅಭಿ ಪ್ರಾಯಪಟಿದ್ದಾರೆ. ನಗರಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು, ಸುದ್ದಿಗಾರರೊಂದಿಗೆ...

ಹಂದಿ ಜ್ವರ : ೫೦೦೦ ಜನರಿಗೆ ಉಚಿತ ಆಯುರ್ವೇದ ಔಷಧಿ

ಹಾಸನ : ರಾಜ್ಯದ ಹಲವೆಡೆ ಹಂದಿ ಜ್ವರ ಕಾಣಿಸಿಕೊಂಡಿದ್ದು, ನಗರದಲ್ಲಿ ಸೋಂಕು ಇಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯು ರೋಗ ನಿಯಂತ್ರಿಸುವ ಅಮೃತೋತ್ತರ ಕಷಾಯದ ೫ ಸಾವಿರ ಸೀಸೆಗಳನ್ನು ಸಾರ್ವಜನಿಕರಿಗೆ ಬುಧವಾರ ಉಚಿತ ವಾಗಿ ಹಂಚಿತು. ರೋಗದ ವಿರುದಟಛಿ ರಕ್ಷಣೆ ಪಡೆ ಯಲು ಸಾರ್ವಜನಿಕರು ಉದ್ದುದ್ದನೆಯ ಸಾಲಿನಲ್ಲಿ ನಿಂತು ಔಷಧಿಯನ್ನು ಪಡೆದುಕೊಂಡರು. ಧರ್ಮಸ್ಥಳ ಆಯುರ್ವೇದ ಕಾಲೇ ಜಿನ ಪ್ರಾಂಶುಪಾಲ ಡಾ।। ಪ್ರಸನ್ನ...

ಅಧಿಕಾರಿಗಳ ಘಿ‘ಟ್ರೀಟ್‌ಘಿ’ಗೆ ಹಣ ತರೋದು ಎಲ್ಲಿಂದ?

ಹಾಸನ : ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯಗಳಿಗೆ ಪುರುಷ ವಾರ್ಡನ್‌ಗಳ ನೇಮಕಾತಿ ಬಹಳಷ್ಟು ವಿವಾದ ಹಾಗೂ ಅನಾಹುತಗಳಿಗೆ ಹಾದಿ ಮಾಡುತ್ತಿದೆ. ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲೂ ಇದೇ ಅವ್ಯವಸ್ಥೆ ಇದ್ದು, ಪುರುಷ ವಾರ್ಡನ್‌ಗಳ ವಿರುದಟಛಿ ವ್ಯಾಪಕ ದೂರುಗಳಿವೆ. ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಮೆಟ್ರಿಕ್‌ಪೂರ್ವ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ವಿಶ್ವ ನಾಥ್‌ ಎಂಬಾತ ವಾರ್ಡನ್‌...

ಅರಕಲಗೂಡಿನಲ್ಲಿ ಮುಂಜಾಗ್ರತೆ : ದಿಗಿಲುಗೊಳ್ಳದಂತೆ ಜನತೆಗೆ ಮನವಿ

ಗೆ ಯಾರೂ ಭಯಪಡಬೇಕಿಲ್ಲ. ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕೈಗೊಂಡಿದೆ ಎಂದು ತಾಲ್ಲೂಕು ವೈದ್ಯಾಧಿ ಕಾರಿ ಡಾ।। ಸ್ವಾಮಿಗೌಡ ಹೇಳಿದ್ದಾರೆ. ಪಟ್ಟಣದ ಬಾಲಕರ ಪದವಿ ಪುರ್ವ ಕಾಲೇಜಿನಲ್ಲಿ ಪ್ರಗತಿ ಟ್ರಸ್ಟ್‌ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಾಗೃತ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಹಂದಿ ಜ್ವರ ಕಾಣಿಸಿಕೊಂಡಿದೆ. ಇದು ನಮ್ಮವರೆಗೂ ಬಂದಿಲ್ಲ. ಸೋಂಕು ಪೀಡಿತರಾದವರು ಅನ್ಯ ರಾಜ್ಯ ಹಾಗೂ ದೇಶಗಳಿಂದ ಬಂದಾಗ ಹಂದಿಜ್ವರ ಹರಡುವ...

ಆ.೩೧ ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಹಾಸನ : ತಡೆಯಾಜ್ಞೆಯಿಂದ ನೆನೆ ಗುದಿಗೆ ಬಿದ್ದಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಆ.೩೧ ರಂದು ನಡೆಯಲಿದೆ. ಅಧ್ಯಕ್ಷ ಸ್ಥಾನವು ಪರಿಶಿಷ್ಟ ಮಹಿ ಳೆಗೂ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ ಮೀಸಲಿಡಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು ೪೦ ಸ್ಥಾನಗಳಿದ್ದು, ಜೆ.ಡಿ.ಎಸ್‌. ೩೬ ಹಾಗೂ ಕಾಂಗ್ರೆಸ್‌ ೪ ಸದಸ್ಯರ ಬಲ ಹೊಂದಿದೆ. ಜಿಲ್ಲಾ ಪಂಚಾಯಿತಿಯ ಮಾಜಿ ಉಪಾ ಧ್ಯಕ್ಷರಾದ ಕಾಮಾಕ್ಷಿ ರಾಜು ಹಾಗೂ ಮಹ...

ಲಂಚ ಸ್ವೀಕಾರ : ಗ್ರಾ.ಪಂ. ಕಾರ್ಯದರ್ಶಿ ಲೋಕಾಯುಕ್ತರ ಬಲೆಗೆ

ಹಾಸನ : ಲಂಚ ಸ್ವೀಕರಿಸುತ್ತಿದ್ದ ಬಿ.ಕಾಟೀಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಂಜೇಗೌಡ ಲೋಕಾ ಯುಕ್ತರ ಬಲೆಗೆ ಬಿದ್ದಿದ್ದಾರೆ. ಮಂಗಳವಾರ ಲೋಕಾಯುಕ್ತ ಎಸ್‌.ಪಿ. ಎನ್‌.ಸ್ವಾಮಿ ಮಾರ್ಗದರ್ಶನ ದಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌ ರುದ್ರಮುನಿ ತಂಡವು ಲಂಚ ಹಣದ ಸಮೇತ ಈತ ನನ್ನು ಬಂಧಿಸಿದೆ. ಬಂಧಿತ ಆರೋಪಿ ನಂಜೇಗೌಡನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಜನತಾ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡನೇ ಹಂತದ ಹಣ ಬಿಡುಗಡೆ ಮಾಡುವ...

ನಗರಸಭೆ :ಕಾಂಗ್ರೆಸ್‌ನಿಂದ ಪ್ರತ್ಯೇಕಗೊಂಡವರ ಭವಿಷ್ಯ ಏನಾದೀತು?

ಹಾಸನ : ನಗರಸಭೆಯಲ್ಲಿ ಕಾಂಗ್ರೆಸ್‌ನಿಂದ ಪ್ರತ್ಯೇಕಗೊಂಡು ಜೆ.ಡಿ.ಎಸ್‌. ಬೆಂಬಲದೊಂದಿಗೆ ಅಧ್ಯಕ್ಷ ರಾಗಿರುವ ನೇತ್ರಾವತಿ ಗಿರೀಶ್‌ ಹಾಗೂ ಅವರ ಬಣದ ಸದಸ್ಯತ್ವ ವಿವಾದದ ವಿಚಾರಣೆಯನ್ನು ಜಿಲ್ಲಾಧಿಕಾರಿ ನವೀನ್‌ ರಾಜ್‌ ಸಿಂಗ್‌ ಈಗಾಗಲೇ ಕೈಗೆತ್ತಿಕೊಂಡಿದ್ದು, ತೀವ್ರ ಕುತೂಹಲ ಹುಟ್ಟಿಸಿದೆ. ನಗರಸಭೆಯಲ್ಲಿ ಕಾಂಗ್ರೆಸ್‌ನ ಒಟ್ಟು ೧೧ ಸದಸ್ಯರಿದ್ದರು. ಈ ಪಕ್ಷದ ಸದಸ್ಯರಾಗಿ ಚುನಾಯಿತರಾಗಿದ್ದ ನೇತ್ರಾವತಿ ಗಿರೀಶ್‌, ಅಂಬಿಕಾ ರವಿಶಂಕರ್‌, ವೆಂಕಟೇಶ್‌, ವಿಜಯಕುಮಾರ್‌ ಹಾಗೂ ಏಜಾಜ್‌ ಪಾಷಾ ಅಲಿಯಾಸ್‌...

ಹರದನಹಳ್ಳಿಗೆ ದೇವೇಗೌಡ ಭೇಟಿ : ವಿಶೇಷ ಪೂಜೆ

ಹೊಳೆನರಸೀಪುರ (ಹರದನ ಹಳ್ಳಿ) : ಜೆ.ಡಿ.ಎಸ್‌.ನ ಸರ್ವೋಚ್ಛ ನಾಯಕ ಹಾಗೂ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಸೋಮ ವಾರ ತಮ್ಮ ಹುಟ್ಟೂರು ಹರದನ ಹಳ್ಳಿಗೆ ಭೇಟಿ ನೀಡಿ, ಗ್ರಾಮದ ಈಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬೆಂಗಳೂರಿನಿಂದ ಸೋಮವಾರ ಹೊಳೆನರಸೀಪುರಕ್ಕೆ ಆಗಮಿಸಿದ ದೇವೇಗೌಡರು, ಹರದನಹಳ್ಳಿಗೆ ತೆರಳಿದರು. ಗ್ರಾಮದ ಈಶ್ವರ ದೇವಾಲಯ ದಲ್ಲಿ ಎರಡು ಗಂಟೆಗಳಿಗೂ ಅಧಿಕ ಕಾಲ ಅಲ್ಲಿಯೇ ಇದ್ದು, ಈಶ್ವರನ ಅನುಗ್ರಹ ಪಡೆದರು....

೪೮ ವಿವಿಧ ಪ್ರಕರಣ ಪತ್ತೆ :೫೫ ಲಕ್ಷ ರೂ. ಮೌಲ್ಯದ ವಸ್ತುಗಳ ವಶ

ಹಾಸನ : ಕಳೆದ ಮೂರು ತಿಂಗಳ ಅವಧಿಯಲ್ಲಿ ೧೦೬ ವಿವಿಧ ಪ್ರಕರಣಗಳು ನಡೆದಿದ್ದು, ೪೮ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಈ ಸಂಬಂಧ ೫೫ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠ ಶರತ್‌ಚಂದ್ರ ತಿಳಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೦೯ ಮೇ. ನಿಂದ ಜುಲೈ ಅಂತ್ಯದವರೆಗೆ ೧೯ ಕೊಲೆ, ೧೧ ದರೋಡೆ, ೧೦ ಸುಲಿಗೆ, ೫೮...

ಕೃಷಿ ಉತ್ಪಾದನೆ ಕುಂಠಿತ :ಡಾ.ಜಿ.ಪರಮೇಶ್ವರ್‌ ಆತಂಕ

ಹಾಸನ : ದೇಶದಲ್ಲಿ ೨೦೦೭- ೦೮ ರ ಸಾಲಿನಲ್ಲಿದ್ದ ಕೃಷಿ ಉತ್ಪಾದನೆಯ ಪ್ರಮಾಣ ೨೩೦ ಮಿಲಿಯನ್‌ ಟನ್‌ ನಿಂದ ೨೦೦೮-೦೯ನೇ ಸಾಲಿನಲ್ಲಿ ೨೦೦ ಮಿಲಿಯನ್‌ ಟನ್‌ಗಿಂತ ಕಡಿಮೆ ಪ್ರಮಾಣಕ್ಕೆ ಕುಸಿದಿದ್ದು, ದೇಶದ ಆಹಾರ ಭದ್ರತೆಗೆ ಧಕ್ಕೆ ತರುವ ಅಪಾಯದ ಸೂಚನೆ ಆಗಿದೆ ಎಂದು ರಾಜ್ಯದ ಮಾಜಿ ಉನ್ನತ ಶಿಕ್ಷಣ ಸಚಿವ ಡಾ।। ಜಿ.ಪರಮೇಶ್ವರ್‌ ಹೇಳಿದ್ದಾರೆ. ಕೃಷಿ ವಿಶ್ವವಿದ್ಯಾಲಯ ಪದವೀ ಧರರ ಸಭಾಂಗಣದಲ್ಲಿ ಭಾನುವಾರ...

ದೇವಾಲಯಗಳಲ್ಲಿ ಕದಿಯುತ್ತಿದ್ದವರ ಬಂಧನ

ಹಾಸನ : ದೇವಸ್ಥಾನಗಳ ಬೀಗ ಮುರಿದು ಹುಂಡಿ ಹಾಗೂ ದೇವರ ಚಿನ್ನ-ಬೆಳ್ಳಿ ಆಭರಣಗಳನ್ನು ಕದ್ದಿದ್ದ ಇಬ್ಬರು ಕಳ್ಳರನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸಿ ೭೦ ಸಾವಿರ ರೂ. ಮೌಲ್ಯದ ಬೆಳ್ಳಿ, ಚಿನ್ನಾಭರಣ, ೨೦೦ ರೂ. ನಗದು ಹಾಗೂ ಕಬ್ಬಿಣದ ರಾಡೊಂದನ್ನು ವಶಪಡಿಸಿಕೊಂಡಿದ್ದಾರೆ. ತುಮಕೂರಿನ ಮರಗೆಲಸಗಾರ ಮೃತ್ಯುಂಜಯ (೫೦), ತಿಪಟೂರು ಹಳೆ ಪಾಳ್ಯದ ರೇವಣ್ಣ (೩೫) ಎಂಬು ವವರು ಬಂಧಿತ ಆರೋಪಿಗಳಾಗಿ ದ್ದಾರೆ. ಪಟ್ಟಣದ ಭುವನೇಶ್ವರಿ...

ಹೊಲ ಮೇಯ್ದ ಬೇಲಿಗಳು : ಹೀಗೊಂದು ಮೆಲುಕು

ಹಾಸನ : ಬೇಲಿಯೇ ಹೊಲ ಮೇಯುತ್ತಿದೆ. ಭ್ರಷ್ಟಾಚಾರ ನಿಗ್ರಹ ಇಲಾಖೆಯ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಭ್ರಷ್ಟರಿಗೆ ಬಾತ್ಮಿದಾರ ರಾಗಿದ್ದಾರೆ. ದಾಳಿಗಳು-ಕಾರ್ಯಾ ಚರಣೆಗಳ ಸುಳಿವನ್ನು ಭ್ರಷ್ಟರಿಗೆ ನೀಡುತ್ತಾ, ಅವರು ಕೊಡುವ ಎಂಜಲು ಕಾಸಿಗೆ ಕೈಯೊಡ್ಡುವುದು ಮಾಮೂ ಲಾಗಿದೆ. ಇದು ಭ್ರಷ್ಟಾಚಾರ ನಿರ್ಮೂ ಲನೆಗೆ ತೊಡಕಾಗಿದೆ. ಇಲಾಖೆಯ ಪ್ರಾಮಾಣಿಕ ಅಧಿಕಾರಿಗಳು ಅಸಹಾ ಯಕರಾಗಿದ್ದು, ಲೋಕಾಯುಕ್ತ ಇಲಾಖೆ ದುರ್ಬಲಗೊಳ್ಳುತ್ತಿದೆಯೇ? ಎಂಬ ದಿಗಿಲು ಹುಟ್ಟಿದೆ. ಭ್ರಷ್ಟಾಚಾರದ ವಿರುದಟಛಿ...

ಜನಪ್ರತಿನಿಧಿಗಳಿಗೆ ಕಿವಿಯೂ ಇಲ್ಲ… ಜಿಲ್ಲಾಡಳಿತಕ್ಕೆ ಕಣ್ಣೂ ಇಲ್ಲ

ಹಾಸನ: ಬೀರನಹಳ್ಳಿ ಕೆರೆ ಬಡಾ ವಣೆಯಲ್ಲಿ ವಾಸ ಮಾಡುತ್ತಿದ್ದ ೭೨ ಸಂತ್ರಸ್ತ ಕುಟುಂಬಗಳು ಈಗ ಅಕ್ಷರಶಃ ಬೀದಿ ಪಾಲಾಗಿವೆ. ಈ ಕುಟುಂಬಕ್ಕೆ ವಸತಿ ಇರಲಿ, ಗುಡಿಸಲು ಹಾಕಿಕೊಳ್ಳಲು ಅನುಮತಿ ಸಿಗುತ್ತಿಲ್ಲ. ಜನಪ್ರತಿನಿಧಿಗಳಿಗೆ ಸಂತ್ರಸ್ತ ಕುಟುಂಬದವರ ಸಮಸ್ಯೆ ಕೇಳುವ ಕಿವಿಯೂ ಇಲ್ಲ, ಜಿಲ್ಲಾಡಳಿತಕ್ಕೆ ಸಮಸ್ಯೆ ನೋಡುವ ಕಣ್ಣೂ ಇಲ್ಲ. ಹಾಗಾಗಿ ಸಂತ್ರಸ್ತರು ದಿಗಿಲುಗೊಂಡಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಬೀರನಹಳ್ಳಿ ಕೆರೆ ಬಡಾವಣೆಯಲ್ಲಿ ಅಕ್ರಮವಾಗಿ...

ಹುಂಡಿ ಕಳವು ಮಾಡುತ್ತಿದ್ದ ಆರೋಪಿ ಬಂಧನ

ಹಾಸನ : ಜಿಲ್ಲೆಯ ವಿವಿಧೆಡೆ ದೇವಸ್ಥಾನದ ಹುಂಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿ ಸುವಲ್ಲಿ ಬೇಲೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಚನ್ನ ರಾಯ ಪಟ್ಟಣ ತಾಲ್ಲೂಕಿನ ಮಲ್ಲೇನ ಹಳ್ಳಿ ಗ್ರಾಮದ ಸೀನ ಆಲಿಯಾಸ್‌ ಶ್ರೀನಿ ವಾಸ್‌ ಎಂದು ಗುರುತಿಸಲಾಗಿದೆ. ಈತ ನಿನ್ನೆ ಹಾಸನದ ಬಸ್‌ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದಾಗ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ವೇಳೆ ಈ ಪ್ರಕರಣ ಹೊರ...

ಶುಲ್ಕ ಭರಿಸಲು ಒತ್ತಾಯಿಸಿ ಡಿ.ಎಡ್‌. ವಿದ್ಯಾರ್ಥಿಗಳ ಪ್ರತಿಭಟನೆ

ಹಾಸನ : ಪರಿಶಿಷ್ಟ ಜಾತಿ ಹಾಗೂ ವರ್ಗದ ಡಿ.ಎಡ್‌. ಅಭ್ಯಾಸ ಮಾಡು ತ್ತಿರುವ ವಿದ್ಯಾರ್ಥಿಗಳು ಶುಲ್ಕವನ್ನು ಭರಿಸಿಲ್ಲ ಎಂದು ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳನ್ನು ಹೊರದಬ್ಬಿರುವ ಘಟನೆಯನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌.ಎಫ್‌.ಐ.) ನೇತೃತ್ವ ದಲ್ಲಿ ಖಾಸಗಿ ಡಿ.ಎಡ್‌. ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಡಿ.ಎಡ್‌. ಅಭ್ಯಾಸ ಮಾಡಲು ಸರ್ಕಾರಿ ಕೋಟಾದ ಖಾಸಗಿ ಕಾಲೇಜುಗಳಿಗೆ ಆಯ್ಕೆಯಾಗುವ ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ...

ಹಕ್ಕು ಪತ್ರಕ್ಕೆ ಆಗ್ರಹಿಸಿ ಕೃಷ್ಣನಗರ ನಿವಾಸಿಗಳ ಧರಣಿ

ಹಾಸನ: ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಬುಧವಾರ ಕೃಷ್ಣನಗರ ಬಡಾವಣೆ ನಿವಾಸಿಗಳು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಮಾಯಿಸಿದ ಅವರು, ಈ ಕುರಿತು ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕರಿಗೆ ಮನವಿ ಸಲ್ಲಿಸಿದರು. ಕಳೆದ ಎರಡು ವರ್ಷದ ಹಿಂದೆ ನಗರದ ಬೀರನಹಳ್ಳಿ ಕೆರೆ ಪ್ರದೇಶದಲ್ಲಿ ೭೨ ಮನೆಗಳನ್ನು ತೆರವುಗೊಳಿಸಲಾಗಿತ್ತು. ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಕೃಷ್ಣ ನಗರದಲ್ಲಿ ನಿವೇಶನ...

೨ ಬ್ಯಾರನ್‌ ಮನೆ -ತಂಬಾಕು ಬೆಂಕಿಗೆ ಆಹುತಿ

ಅರಕಲಗೂಡು : ತಾಲ್ಲೂಕಿನ ಹುಲ್ಲಂಗಾಲ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ೨ ಬ್ಯಾರನ್‌ ಮನೆ ಹಾಗೂ ತಂಬಾಕು ಸುಟ್ಟು ಹೋಗಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ಬುಧವಾರ ರಾತ್ರಿ ೮ರ ಸುಮಾರಿಗೆ ಹುಲ್ಲಂಗಾಲದ ನಿಂಗೇಗೌಡರಿಗೆ ಸೇರಿದ ಬ್ಯಾರನ್‌ ಮನೆಗೆ ಬೆಂಕಿ ಬಿತ್ತು. ಸುಮಾರು ೭ ಎಕರೆಯಲ್ಲಿ ಬೆಳೆಯ ಲಾಗಿದ್ದ ತಂಬಾಕು ಸೊಪ್ಪನ್ನು ಡಬಲ್‌ ಬ್ಯಾರನ್‌ ಮನೆಯಲ್ಲಿ ಒಂದು ಹದಕ್ಕೆ ಬೇಯಿಸುತ್ತಿದ್ದಾಗ ಆಕಸ್ಮಿಕ ಬೆಂಕಿ...

ದರೋಡೆಗೆ ಹೊಂಚು ಹಾಕಿದ್ದ ಹೊರ ಜಿಲ್ಲೆಯ ಮೂವರ ಸೆರೆ

ಹಾಸನ : ಅರಸೀಕೆರೆ ಪಟ್ಟಣದಲ್ಲಿ ಒಂಟಿಮನೆಗಳನ್ನು ಗುರುತಿಸಿ, ಅವುಗಳ ದರೋಡೆಗೆ ಹೊಂಚು ಹಾಕಿದ್ದ ಅಂತರ್‌ ಜಿಲ್ಲಾ ದರೋಡೆಕೋರರ ತಂಡದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಐದು ಜನರ ಅಪರಿಚಿತ ಗುಂಪೊಂದು ಆಗಸ್ಟ್‌ ೧೧ರಂದು ಬೆಳಿಗ್ಗೆ ೧೧-೩೦ರಲ್ಲಿ ಕಡೂರಿನಲ್ಲಿ ನವಾಬ್‌ ಜಾನ್‌ ಎಂಬು ವವರ ಕೆ.ಎ.೦೪-ಎಂ.ಸಿ.೨೯೮೮ ನಂಬ ರಿನ ಕಾರನ್ನು ಬಾಡಿಗೆಗೆ ಪಡೆದರು. ಅದ ರಲ್ಲಿ ಕಬ್ಬಿಣದ ರಾಡುಗಳನ್ನು ತುಂಬಿ ಕೊಂಡು ಅರಸೀಕೆರೆಗೆ ಬಂದರು. ಅವರು...

ವೀರಪ್ಪನ್‌ ಬೇಡಿಕೆ ಈಡೇರಿಸಿದ ಫಚಿನ್ನತಂಬಿಫ:ಯಡಿಯೂರಪ್ಪ ವಿರುದಟಛಿ ವಾಟಾಳ್‌ ಗುಡುಗು

ಹಾಸನ: ಬೆಂಗಳೂರಿನಲ್ಲಿ ತಿರು ವಳ್ಳವರ್‌ ಪ್ರತಿಮೆ ಪ್ರತಿಷ್ಟಾಪಿಸಿ, ನರ ಹಂತಕ ವೀರಪ್ಪನ್‌ ಬೇಡಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪೂರೈ ಸಿದ್ದಾರೆ ಎಂದು ಕನ್ನಡ ಚಳುವಳಿ ನಾಯಕ ವಾಟಾಳ್‌ ನಾಗರಾಜ್‌ ಕಿಡಿ ಕಾರಿದ್ದಾರೆ. ಬಂಧನಕ್ಕೊಳಗಾಗಿದ್ದ ಅವರು, ನಗರದ ನ್ಯಾಯಾಲಯದಲ್ಲಿ ಮಂಗಳ ವಾರ ಜಾಮೀನು ಪಡೆದ ನಂತರ, ಸುದ್ದಿ ಗಾರರೊಂದಿಗೆ ಮಾತನಾಡುತ್ತಿದ್ದರು. ಕರ್ನಾಟಕ ಹಾಗೂ ತಮಿಳು ನಾಡು ನಡುವಿನ ಹೊಗೇನಕಲ್‌ ಹಾಗೂ ಇತರೆ ಯಾವುದೇ ವಿವಾದ ಗಳನ್ನು...

ಶೀಘ್ರ ಬೆಂಗಳೂರು-ಮಂಗಳೂರು ಹಗಲು ವೇಳೆ ರೈಲು ಸಂಚಾರ

ಹಾಸನ : ಬೆಂಗಳೂರು- ಮಂಗ ಳೂರು ನಡುವೆ ಹಗಲಿನ ವೇಳೆ ರೈಲ್ವೆ ಸಂಚಾರಕ್ಕೆ ಎಲ್ಲಾ ಹಂತದಲ್ಲಿ ಒಪ್ಪಿಗೆ ದೊರೆತಿದೆ ಎಂದು ತಿಳಿದು ಬಂದಿದೆ. ಯಶವಂತಪುರ, ಅರಸೀಕೆರೆ, ಹಾಸನ ಮಾರ್ಗವಾಗಿ ಮಂಗಳೂರಿಗೆ ಹಗಲು ವೇಳೆ ರೈಲ್ವೆ ಸಂಚಾರ ಶೀಘ್ರ ಆರಂಭವಾಗಲಿದೆ. ಇಲಾಖೆಯು ಇದಕ್ಕೆ ಒಪ್ಪಿಗೆ ನೀಡಿದ್ದು, ದಿನಾಂಕ ಗೊತ್ತುಪಡಿ ಸುವ ಕಾರ್ಯ ಮಾತ್ರ ಬಾಕಿ ಇದೆ. ಯಶವಂತಪುರವನ್ನು ಬೆಳಿಗ್ಗೆ ೬ ಗಂಟೆಗೆ ಬಿಟ್ಟು ಹಾಸನವನ್ನು...

ವಾಹನ ಸಂಚಾರಕ್ಕೆ ಭಯಂಕರ ಕಷ್ಟ :ನಿತ್ಯ ಪ್ರಯಾಣಿಕರ ಹಿಡಿಶಾಪ

ಹಾಸನ : ಹಾಸನ ಜಿಲ್ಲೆಯಲ್ಲಿ ಬಹುತೇಕ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದರೆ ಹಾಸನ-ದುದ್ದ ರಸ್ತೆಯಲ್ಲಿ ವಾಹನಗಳು ಸಂಚರಿಸುವುದೇ ಭಯಂಕರ ಕಷ್ಟಸಾಧ್ಯವಾಗಿದೆ. ತೀರಾ ಎದೆಗಾರಿಕೆ ಇರುವ ಚಾಲಕರು ವಾಹನ ಚಾಲನೆ ಮಾಡಬೇಕು ! ಈ ರಸ್ತೆಯ ದುರಸ್ತಿಗೆ ಸಂಬಂಧಿ ಸಿದಂತೆ ಹಲವಾರು ಬಾರಿ ವರದಿಗಳು ಪ್ರಕಟಗೊಳ್ಳುತ್ತಲೇ ಇವೆ. ಆದರೆ ಎಮ್ಮೆ ಚರ್ಮದ ಆಡಳಿತಕ್ಕೆ ಇದ್ಯಾವುದರೂ ಪರಿವೆಯೂ ಇದ್ದಂತಿಲ್ಲ. ರಾಜ್ಯ ಸರ್ಕಾರ ನಿಷ್ಕಿೃಯತೆಯಿಂದ ರಸ್ತೆ...

ಕ.ರ.ವೇ. ಕಾರ್ಯಕರ್ತರಿಂದ ಉರುಳು ಸೇವೆ

ಹಾಸನ : ಕ.ರ.ವೇ. ರಾಜ್ಯಾಧ್ಯಕ್ಷ ಟಿ.ಎನ್‌.ನಾರಾಯಣಗೌಡ ಅವರನ್ನು ಬಂಧಿಸಿರುವ ಕ್ರಮ ಖಂಡಿಸಿ ಜಿಲ್ಲಾ ಕ.ರ.ವೇ. ಕಾರ್ಯಕರ್ತರು ಉರುಳು ಸೇವೆ ಮಾಡಿ ಪ್ರತಿಭಟಿಸಿದರು. ನಗರದ ಹೇಮಾವತಿ ಪ್ರತಿಮೆ ಮುಂಭಾಗದಲ್ಲಿ ಭುನುವಾರ ಜಮಾ ಯಿಸಿದ ಕಾರ್ಯಕರ್ತರು ಮೊದಲು ಘೊಷಣೆ ಕೂಗಿದರು. ನಂತರ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾ ಅಂಚೆ ಅಧೀಕ್ಷಕರ ಕಛೇರಿಯವ ರೆವಿಗೂ ಉರುಳು ಸೇವೆ ಮಾಡಿದರು. ಈ ಸಂದರ್ಭದಲ್ಲಿ ಪೊಲೀಸರು ಆಗ ಮಿಸಿ ಉರುಳು...