Janatha Madhyama » ಜಿಲ್ಲೆ

ಪಠ್ಯಪುಸ್ತಕಗಳಿಗೆ ಖಾಸಗಿ ಶಾಲೆಗಳ ಆಗ್ರಹ
ಹಾಸನ : ಶಾಲೆಗಳು ಆರಂಭಗೊಂಡು ಒಂದೂವರೆ ತಿಂಗಳು ಕಳೆದರೂ, ಪಠ್ಯ ಪುಸ್ತಕಗಳನ್ನು ಸರ್ಕಾರ ವಿತರಿಸಿಲ್ಲ ಎಂದು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಬುಧವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ದೂರು ನೀಡಿದವು. ಸರ್ಕಾರ ನಿಗದಿಪಡಿಸಿದ ಅವಧಿಯೊಳಗೆ ಪಠ್ಯ ಪುಸ್ತಕಗಳಿಗೆ ಹಣದ ಡಿ.ಡಿ. ನೀಡಿ ದರೂ, ಪುಸ್ತಕಗಳನ್ನು ಇನ್ನೂ ಸರಬರಾಜು ಮಾಡಿಲ್ಲ. ಇದರಿಂದ ವಿದ್ಯಾರ್ಥಿಗಳ ವಿದ್ಯಾ ಭ್ಯಾಸಕ್ಕೆ ಅಡ್ಡಿಯಾಗಿದೆ. ಕೂಡಲೇ ಪಠ್ಯ ಪುಸ್ತಕಗಳನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗು ವುದು ಎಂದು ಎಚ್ಚರಿಸಿದರು. ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ಹೆಚ್‌.ಎಸ್‌. ಅನಿಲ್‌ಕುಮಾರ್‌, ಉಪಾಧ್ಯಕ್ಷೆ ತಾರಾ ಎಸ್‌.ಸ್ವಾಮಿ ನೇತೃತ್ವ ವಹಿಸಿದ್ದರು.

ಗೊಬ್ಬರ ಅಪಹರಿಸಿದ್ದ ಲಾರಿ ಮಾಲೀಕ-ಚಾಲಕ ಸೆರೆ
ಹಾಸನ: ೩,೮೭,೧೨೪ ರೂ. ಬೆಲೆಯ ೫೦ ಕೆ.ಜಿ.ಯ ಒಟ್ಟು ೩೨೦ ಚೀಲ ರಸಗೊಬ್ಬರವನ್ನು ಸಂಬಂಧಪಟ್ಟವರಿಗೆ ಸರಬರಾಜು ಮಾಡದೆ ಅಪಹರಿಸಿದ್ದ ಲಾರಿ ಮಾಲೀಕ ಹಾಗೂ ಚಾಲಕನನ್ನು ನಗರದ ಬಡಾವಣೆ ಪೊಲೀಸರು ಬಂಧಿಸಿ, ಗೊಬ್ಬರ ಹಾಗೂ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕು ಅಣ್ಣೀಗೇರಿಯ ಲಾರಿ ಮಾಲೀಕ ಗುರಪ್ಪ ಕಲ್ಲೂರ್‌ (೨೪) ಹಾಗೂ ಅದೇ ಊರಿನ ಚಾಲಕ ಮದಾರ್‌ ಸಾಬ್‌(೨೪) ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಜೂನ್‌ ೧೮ರಂದು ಹೆಚ್‌.ಎನ್‌. ಪುರ ರಸ್ತೆಯ ಹೊಸಕೊಪ್ಪಲು ಬಳಿ ಚಂದ್ರಣ್ಣ ಎಂಬುವವರು ಸದರಿ ಗೊಬ್ಬರ ವನ್ನು ಆರೋಪಿಗಳಿಗೆ ನೀಡಿ, ಗದಗ್‌ ಜಿಲ್ಲೆಯ ಜಮಖಂಡಿಯ ಮಹಾಲಕ್ಷ್ಮೀ ಟ್ರೇಡಿಂಗ್‌ ಕಂಪೆನಿಗೆ ತಲುಪಿಸುವಂತೆ ತಿಳಿಸಿದ್ದರು. ಆದರೆ ಆರೋಪಿಗಳು ಅದನ್ನು ಅಪಹರಿಸಿದ್ದರು. ಪ್ರಕರಣ ದಾಖಲಿಸಿದ ಬಡಾವಣೆ ಪೊಲೀಸರು, ವೃತ್ತ ನಿರೀಕ್ಷಕ ಬಿ.ಆರ್‌. ವೇಣು ಗೋಪಾಲ್‌ ನೇತೃತ್ವದಲ್ಲಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾದರು. ಈ ಆರೋಪಿಗಳು ಮುನಿರಾಬಾದ್‌ ಹಾಗೂ ಬಳ್ಳಾರಿ ಜಿಲ್ಲೆ ಮರಿಯಮ್ಮನ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ತಲಾ ೧ ಲೋಡ್‌ ಕಬ್ಬಿಣವನ್ನು ಅಪ ಹರಿಸಿ, ಶಿಕ್ಷೆಗೂ ಗುರಿಯಾಗಿದ್ದರು. ಬಡಾವಣೆ ಪೊಲೀಸ್‌ ಸಬ್‌ ಇನ್ಸ್‌ ಪೆಕ್ಟರ್‌ ನಾಗರಾಜ್‌ ಹೊನ್ನೂರು ಹಾಗೂ ಅವರ ಸಿಬ್ಬಂದಿ ಕೂಡ ತನಿಖೆಯಲ್ಲಿ ಪಾಲ್ಗೊಂಡಿದ್ದರು.

ದಕ್ಷಿಣ ಪದವೀಧರ ಕ್ಷೇತ್ರ : ಶೇ.೫೩.೦೬ ಮತದಾನ
ಹಾಸನ : ರಾಜ್ಯ ವಿಧಾನ ಪರಿಷತ್ಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಬುಧ ವಾರ ನಡೆದ ಚುನಾವಣೆಯು ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ.೫೩.೬೦ ಮತದಾನವಾಗಿದೆ. ಮೈಸೂರು, ಮಂಡ್ಯ, ಚಾಮರಾಜ ನಗರ ಹಾಗೂ ಹಾಸನ ಜಿಲ್ಲೆಯಲ್ಲಿ ಪದವೀಧರ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆ ೮ ಗಂಟೆಗೆ ಆರಂಭಗೊಂಡ ಮತದಾನವು, ಸಂಜೆ ೪ ಗಂಟೆಗೆ ಮುಗಿ ಯಿತು. ಬೆಳಿಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ, ಮಧ್ಯಾಹ್ನದ ವೇಳೆಗೆ ಬಿರುಸು ಪಡೆದುಕೊಂಡಿತು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾ ವಣೆಗೆ ಮತಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡ ಲಾಗಿತ್ತು. ಈ ಚುನಾವಣೆಯಲ್ಲಿಯೂ ಮತದಾರರ ಪ್ರತಿಕ್ರಿಯೆ ನೀರಸವಾಗಿತ್ತು. ಅಭ್ಯರ್ಥಿಗಳ ಬೆಂಬಲಿಗರು ಮಾತ್ರ ಭಾರೀ ಉತ್ಸಾಹದಲ್ಲಿದ್ದುದು ಕಂಡು ಬಂತು.

ಕಿರುಕುಳದಿಂದಆತ್ಮಹತ್ಯೆಗೆಯತ್ನಿಸಿದ್ದ ಯುವತಿಸಾವು
ಹಾಸನ : ನೆರೆಮನೆಯ ವ್ಯಕ್ತಿಯ ಕಿರು ಕುಳದಿಂದ ಬೇಸತ್ತು ಕಳೆದ ಗುರುವಾರ ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದ ಯುವತಿ ಬುಧವಾರ ಮೃತಪಟ್ಟಳು. ಹೆತ್ತೂರು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಎಂಬು ವವರ ಪತಿ ಕುಮಾರ್ ಎಂಬಾತ ನೆರೆ ಮನೆಯ ನಿವಾಸಿಗಳಾದ ಗೀತಾ ಹಾಗೂ ಧರ್ಮರಾಜ್ ಎಂಬುವರ ಮಗಳು ನಂದಿನಿ (೨೨) ಎಂಬಾಕೆಯನ್ನು ನಿತ್ಯವೂ ಪೀಡಿಸುತ್ತಿದ್ದನು. ಟಿ.ಸಿ.ಹೆಚ್. ಓದು ತ್ತಿದ್ದ ಈಕೆ, ಕಾಲೇಜಿಗೆ ಹೋಗು ವಾಗ ರಸ್ತೆ ಮಧ್ಯೆ ಅಡ್ಡ ಹಾಕಿ ಕಿರುಕುಳ ನೀಡುತ್ತಿದ್ದನು ಎಂದು ಹೇಳಲಾಗಿದೆ. ಇದರಿಂದ ಜಿಗುಪ್ಸೆಗೊಂಡ ಆಕೆ ಸುಮಾರು ೪೦ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಅಸ್ವಸ್ಥ ಗೊಂಡಿದ್ದ ಆಕೆಯನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಹಣದ ಆಮಿ-ಷ- ತೋರಿ-ಸಿ ಮಾಂಗಲ್ಯ ಸರ ಅಪ-ಹ-ರ-ಣ
ಹಾಸನ : ಅಪ-ರಿ-ಚಿ-ತರು ಗೃಹಿ-ಣಿ- ಯೊ-ಬ್ಬ-ಳಿಗೆ ಹಣದ ಆಸೆ ತೋರಿಸಿ ಆಕೆಯ ಕೊರ-ಳ-ಲ್ಲಿದ್ದ ಚಿನ್ನದ ಮಾಂಗಲ್ಯ ಸರ-ವನ್ನು ಅಪ-ಹ-ರಿ-ಸಿದ ಘಟನೆ ನಡೆ-ದಿದೆ. ಬೂವ-ನ-ಹಳ್ಳಿ ಗ್ರಾಮದ ಜಯಮ್ಮ ಎಂಬು-ವ-ವರು ತರ-ಕಾರಿ ತರಲು ರೈಲ್ವೇ ಸ್ಟೇಷನ್ ಬಳಿ ನಡೆ-ಯು-ತ್ತಿದ್ದ ಸಂತೆಗೆ ಬಂದಿ-ದ್ದರು. ತರ-ಕಾರಿ ತೆಗೆ-ದು-ಕೊ-ಳ್ಳು-ತ್ತಿ- ದ್ದಾಗ ಅಪ-ರಿ-ಚಿತ ವ್ಯಕ್ತಿ-ಯೊಬ್ಬ ಕರ್ಚೀಫ್ ಕಟ್ಟಿದ್ದ ವಸ್ತು-ವೊಂದನ್ನು ಬೀಳಿ-ಸಿ-ಕೊಂಡು ಕಾಣ-ದಂತೆ ಹೋದನು. ಅದನ್ನು ಕಂಡ ಜಯಮ್ಮ ಅಪ-ರಿ-ಚಿ-ತ-ನನ್ನು ಕರೆದರು. ಆದರೂ ಆತ ಕೇಳಿ-ಸ-ದ-ವ-ನಂತೆ ಹೋದನು. ಮತ್ತೊಬ್ಬ ಅಪ-ರಿ-ಚಿತ ಹೆಂಗಸು ಕೆಳಗೆ ಬಿದ್ದಿದ್ದ ಕರ್ಚೀಫ್ ಗಂಟನ್ನು ಎತ್ತಿ- ಕೊಂಡಳು. ಇದ-ರಲ್ಲಿ ಹಣ ಇದೆ. ಹಂಚಿ- ಕೊ-ಳ್ಳೋಣ ಎಂದು ಜಯ-ಮ್ಮ-ಳಿಗೆ ಹೇಳಿ- ದ-ಳು. ಆಕೆ-ಯನ್ನು ಶಂಕ-ರಿ-ಪು-ರಂನ ಪಾರ್ಕ್-ನೊ-ಳಗೆ ಕರೆ-ದು-ಕೊಂಡು ಹೋಗಿ, ಕರ್ಚೀಫ್ ಗಂಟನ್ನು ಬಿಚ್ಚುತ್ತಿ- ದ್ದಾಗ ಅದನ್ನು ಬೀಳಿ-ಸಿದ್ದ ವ್ಯಕ್ತಿ ಅಲ್ಲಿಗೆ ಬಂದನು. ನನ್ನ ದುಡ್ಡನ್ನು ನೀವು ತೆಗೆ-ದು-ಕೊಂಡಿ- ದ್ದೀರಿ. ಪೊಲೀ-ಸ-ರಿಗೆ ಹೇಳು-ತ್ತೇನೆ ಎಂದು ಬೆದ-ರಿಕೆ ಹಾಕಿ-ದನು. ಇದ-ರಿಂದ ಅಪ-ರಿ- ಚಿತ ಹೆಂಗಸು ಬೆದ-ರಿ-ದಂತೆ ನಟಿ-ಸಿ-ದಳು. ಕೊರ-ಳಿ-ನ-ಲ್ಲಿ-ರುವ ಸರ-ವನ್ನು ಆತ ಕಿತ್ತು-ಕೊ- ಳ್ಳು-ತ್ತಾನೆ. ಅದನ್ನು ಕಾಣ-ದಂತೆ ನಿನ್ನ ಸೀರೆ ಸೆರ-ಗಿ-ನಲ್ಲಿ ಕಟ್ಟು-ತ್ತೇನೆ ಎಂದು ಆಕೆ ಜಯ- ಮ್ಮ-ಳಿಗೆ ಹೇಳಿ, ಮಾಂಗಲ್ಯ ಸರ-ವನ್ನು ಪಡೆದು ಸೆರ-ಗಿಗೆ ಕಟ್ಟುವಂತೆ ನಟಿ-ಸಿ-ದಳು. ನಂತರ ಆಕೆ ನಾಪ-ತ್ತೆ-ಯಾ-ದಳು. ಸ್ವಲ್ಪ ಸಮ-ಯದ ನಂತರ ಜಯಮ್ಮ ಸೀರೆ ಸೆರ-ಗಿನ ಗಂಟನ್ನು ಬಿಚ್ಚಿ ನೋಡಿ- ದಾಗ ಅದ-ರಲ್ಲಿ ಮಾಂಗಲ್ಯ ಸರ ಇರ- ಲಿಲ್ಲ. ವಂಚ-ನೆಯ ಅರಿ-ವಾಗಿ ಬಡಾ-ವಣೆ ಪೊಲೀ-ಸ-ರಿಗೆ ದೂರು ನೀಡಿ-ದ್ದಾಳೆ.

ಸುಳ್ಳು ಜಾತಿ ಪತ್ರ : ಆರೋ-ಪ
ಹಾಸನ : ಮೀಸ-ಲಾತಿ ಸೌಲ-ಭ್ಯ- ವನ್ನು ದುರು-ಪ-ಯೋ-ಗಪಡಿ-ಸಿ-ಕೊಂಡು ಸಕ-ಲೇ-ಶ-ಪುರ ತಾಲ್ಲೂಕು ಬ್ಯಾಕ-ರ-ವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಬ್ಬಡಿ -ಕೊಣ-ನೂರು ಕ್ಷೇತ್ರ-ದಿಂದ ಚುನಾ-ಯಿ- ತ-ರಾ-ಗಿ-ರುವ ರಂಗ-ನಾಥ್ ವಿರುದ್ಧ ಜಿಲ್ಲಾ-  ಧಿ-ಕಾ-ರಿ-ಗಳು ಕ್ರಮ ಕೈಗೊ-ಳ್ಳ-ಬೇಕು. ಇಲ್ಲ- ದಿ-ದ್ದರೆ ನ್ಯಾಯಾ-ಲ-ಯದ ಮೊರೆ ಹೋಗ- ಲಾ-ಗು-ವುದು ಎಂದು ಆಲೂರು -ಸಕ-ಲೇ- ಶ-ಪುರ ಕ್ಷೇತ್ರದ ಬಿಜೆಪಿ ವಕ್ತಾರ ಎ.ಎಂ. ಪೃಥ್ವಿ ಹೇಳಿ-ದರು. ಬುಧ-ವಾರ ಸುದ್ದಿ-ಗೋ-ಷ್ಠಿ-ಯಲ್ಲಿ ಮಾತ-ನಾಡಿ, ರಂಗ-ನಾಥ್ ಅವರು ಪಂಚಾಯ್ತಿ ಚುನಾ-ವ-ಣೆಗೆ ಸ್ಪರ್ಧಿ-ಸಲು ಹಿಂದು-ಳಿದ ವರ್ಗ-(-ಬ) ಮೀಸ-ಲಾತಿ ದೃಢೀ-ಕ-ರ-ಣ ಪತ್ರ ಪಡ-ದಿ-ದ್ದರು. ಆದರೆ ಹಿಂದೆ ಹಿಂದು-ಳಿದ ವರ್ಗ-(ಅ) ಮೀಸ- ಲಾದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ- ವನ್ನು ಪಡೆದು ಎರಡೂವರೆ ವರ್ಷ-ಗಳ ಕಾಲ ಅಧಿ-ಕಾರ ಪಡೆ-ದಿ-ದ್ದಾ-ರೆಂದರು. ಒಂದೇ ಅಭ್ಯ-ರ್ಥಿಗೆ ಎರಡು ಭಾರೀ ಪ್ರತ್ಯೇ-ಕ-ವಾಗಿ ಮೀಸಲು ಸ್ಥಾನದ ಪ್ರಮಾಣ ಪತ್ರ ನೀಡಿದ ಅಧಿ-ಕಾ-ರಿ-ಗಳು ಹಾಗೂ ಇವರ ವಿರುದ್ಧ ಕ್ರಮಕ್ಕೆ ಒತ್ತಾ- ಯಿ-ಸಿ-ದ್ದಾರೆ.

ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ
ಹಾಸನ : ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ. ಪದವೀಧರ ಕ್ಷೇತ್ರದ ಸಹಾಯಕ ಚುನಾ ವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನವೀನ್ರಾಜ್ ಸಿಂಗ್, ಶಾಂತಿ ಹಾಗೂ ಮುಕ್ತ ಮತದಾನಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಜೂನ್ ೨೧ಕ್ಕೆ ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ೨೧ ಮತದಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಹಾಸನ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತದಾರರಿರುವುದರಿಂದ ನಗರ ದಲ್ಲಿ ೯ ಮತ ಕೇಂದ್ರಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಆಲೂರು,ಸಕಲೇಶಪುರ ಹಾಗೂಅರಕಲ ಗೂಡು ತಾಲ್ಲೂಕಿನಲ್ಲಿ ತಲಾ ಒಂದು ಮತ ಕೇಂದ್ರ ತೆರೆಯಲಾಗುವುದು ಎಂದು ಜಿಲ್ಲಾ ಚುನಾವಣಾ ಶಾಖೆಯ ಮೂಲಗಳು ತಿಳಿಸಿವೆ. ಉಳಿದಂತೆ ಹೊಳೆರನಸೀಪುರ ೨, ಬೇಲೂರು ೨, ಚನ್ನರಾಯಪಟ್ಟಣದಲ್ಲಿ ೨ ಹಾಗೂ ಅರಸೀಕೆರೆ ಪಟ್ಟಣದಲ್ಲಿ ೩ ಕೇಂದ್ರ ತೆರೆಯಲಾಗುವುದು ಎಂದು ಸ್ಪಷ್ಟಪಡಿಸಿದೆ. ಹಾಸನ ನಗರದಲ್ಲಿ ಆರ್.ಸಿ.ರಸ್ತೆಯಲ್ಲಿನ ಪದವಿ ಪೂರ್ವ ಕಾಲೇಜಿನಲ್ಲಿ ೩ ಮತದಾನ ಕೇಂದ್ರ, ಸರ್ಕಾರಿ ಕಲಾ ಕಾಲೇಜಿನಲ್ಲಿ ೩ ಮತಕೇಂದ್ರ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ೩ ಮತದಾನ ಕೇಂದ್ರ ತೆರೆಯಲಾಗುವುದು ಎಂದು ಹೇಳಿದೆ. ಬೇಲೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೨, ಅರಸೀಕೆರೆ ಪಟ್ಟಣದ ಸೇಂಟ್ ಮೆರೀಸ್ ಪ್ರೌಢಶಾಲೆ ಯಲ್ಲಿ ೩, ಆಲೂರು ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದೆ. ಸಕಲೇಶಪುರ ಪಟ್ಟಣದ ತಾಲ್ಲೂಕು ಕಛೇರಿ ಕೋರ್ಟ್ ಹಾಲ್ನಲ್ಲಿ ಅರಕಲಗೂಡು ಪಟ್ಟಣದ ತಾಲ್ಲೂಕು ಕಚೇರಿ ಕೋರ್ಟ್ ಹಾಲ್ನಲ್ಲಿ , ಹೊಳೆನರಸೀಪುರ ಪಟ್ಟಣದ ತಾಲ್ಲೂಕು ಕಛೇರಿಸಭಾಂಗಣಹಾಗೂಆಡಳಿತ ಶಾಖೆ ಕೊಠಡಿಯಲ್ಲಿ ಮತದಾನ ನಡೆದರೆ, ಚನ್ನರಾಯಪಟ್ಟಣದ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮತದಾನ ನಡೆಯಲಿದೆ.

ತವರಿನ ತೊಟ್ಟಿಲು ದತ್ತಿ ಸಂಸ್ಥೆ ಮೇಲೆ ಸರ್ಕಾರ ದಾಳಿ : ೪ ಮಕ್ಕಳ ವಶ
ಹಾಸನ : ಮಾನ್ಯತೆ ಪಡೆಯದೆ ಅನಧಿ ಕೃತವಾಗಿ ಮಕ್ಕಳನ್ನು ದತ್ತು ಪಡೆಯುತ್ತಿರುವ ಡಾ।।ಪಾಲಾಕ್ಷ ನೇತೃತ್ವದ ತವರಿನ ತೊಟ್ಟಿಲು ಚಾರಿಟಬಲ್ ಟ್ರಸ್ಟ್ ಮೇಲೆ ಮಹಿಳಾ ಮತ್ತು ಕಲ್ಯಾಣ ಅಧಿಕಾರಿಗಳು ಬುಧವಾರ ಸಂಜೆ ದಾಳಿ ನಡೆಸಿ, ಒಂದು ಗಂಡು ಮಗು ಸೇರಿದಂತೆ ಒಟ್ಟು ನಾಲ್ಕು ಮಕ್ಕಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶನಾಲಯದ ಆದೇಶದ ಮೇರೆಗೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಆರಂಭಗೊಂಡ ತವರಿನ ತೊಟ್ಟಿಲು ಚಾರಿಟಬಲ್ ಟ್ರಸ್ಟ್ ಸರ್ಕಾರದಿಂದ ಮಾನ್ಯತೆ ಪಡೆದಿರಲಿಲ್ಲ. ಆದರೂ, ಮಕ್ಕಳನ್ನು ದತ್ತು ತೆಗೆದುಕೊಳ್ಳು ತ್ತಿದ್ದುದರಿಂದ ಈ ಕ್ರಮ ಕೈಗೊಳ್ಳಲಾಯಿತು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಗೀತಾ ತಿಳಿಸಿದ್ದಾರೆ. ವಶಪಡಿಸಿಕೊಂಡ ಮಕ್ಕಳಲ್ಲಿ ಮೂರು ಹೆಣ್ಣು ಹಾಗೂ ಒಂದು ಗಂಡು ಮಗು ಇದ್ದು, ಒಂದರಿಂದ ಒಂದೂವರೆ ತಿಂಗಳಿನವು ಆಗಿವೆ. ಅವುಗಳಲ್ಲಿ ಮೂರು ಮಕ್ಕಳನ್ನು ಕಾಮ ಧೇನು ದತ್ತಿ ಸಂಸ್ಥೆಯ ವಶಕ್ಕೆ ನೀಡಲಾಗಿದ್ದು, ಇನ್ನೊಂದು ಮಗು ಅನಾರೋಗ್ಯ ಪೀಡಿತ ರಾಗಿರುವುದರಿಂದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾವುದೇ ದತ್ತಿ ಸಂಸ್ಥೆ ಸ್ಥಾಪನೆಗೊಂಡು ಮೂರು ವರ್ಷಗಳ ನಂತರ ಸರ್ಕಾರದ ಮಾನ್ಯತೆ ಪಡೆಯಬೇಕು. ಆದರೆ ತವರು ಚಾರಿ ಟಬಲ್ ಟ್ರಸ್ಟ್ ಅಧ್ಯಕ್ಷ ಪಾಲಾಕ್ಷ , ಕಳೆದ ಡಿಸೆಂಬರ್ನಲ್ಲಿ ಮಾನ್ಯತೆ ಕೋರಿ ಸರ್ಕಾರಕ್ಕೆ  ಅರ್ಜಿ ಸಲ್ಲಿಸಿದ್ದು, ಅದಿನ್ನೂ ಪರಿಶೀಲನಾ ಹಂತದಲ್ಲಿದೆ. ಆದರೂ, ಮಕ್ಕಳನ್ನು ಅವರು ಅನಧಿಕೃತವಾಗಿ ದತ್ತು ಪಡೆಯುತ್ತಿದ್ದಾರೆ. ಕಾನೂನು ಪ್ರಕಾರ ಇದು ಅಪರಾಧ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರೂ ಆಗಿರುವ ಡಾ।।ಪಾಲಾಕ್ಷ ಅವರಿಗೆ ಮಾನ್ಯತೆ ಪಡೆಯದೆ ಮಕ್ಕಳನ್ನು ದತ್ತು ತೆಗೆದು ಕೊಳ್ಳಬಾರದು ಎಂಬ ಅರಿವಿದ್ದರೂ, ತಪ್ಪೆಸಗಿ ದ್ದಾರೆ ಎಂದು ಅಧಿಕಾರಿಗಳು ವಿಷಾದಿಸಿದ್ದಾರೆ. ದಾಳಿಯ ನಂತರದ ವರದಿಯನ್ನು ಇಲಾಖೆಯ ನಿರ್ದೇಶನಾಲಯಕ್ಕೆ ರವಾ ನಿಸಿದ್ದು, ಮುಂದಿನ ಕ್ರಮವನ್ನು ಅದೇ ಕೈಗೊಳ್ಳಲಿದೆ ಎಂದು ಗೀತಾ ತಿಳಿಸಿದ್ದಾರೆ. ತವರು ಚಾರಿಟಬಲ್ ಟ್ರಸ್ಟ್ ಸರ್ಕಾರ ದಿಂದ ಮಾನ್ಯತೆ ಪಡೆಯುವವರೆಗೂ ಯಾರೂ ಕೂಡ ಮಕ್ಕಳನ್ನು ಅದಕ್ಕೆ ದತ್ತು ಕೊಡಬಾರದು ಎಂದು ಅವರು ವಿನಂತಿಸಿದ್ದಾರೆ.

ಕೃಷಿ ಭೂಮಿಗೆ ಕೈಗಾರಿಕೆ ತ್ಯಾಜ್ಯ : ವಿಜ್ಞಾನಿಗಳ ತಂಡ ಪರಿಶೀಲನೆ
ಹಾಸನ : ನಗರದ ಹೊರವಲಯದಲ್ಲಿ ರುವ ಹಿಮ್ಮತ್ ಸಿಂಗ್ ಸಿದ್ಧ ಉಡುಪು ಘಟಕದಿಂದ ಪ್ರತಿನಿತ್ಯ ಕೆಮಿಕಲ್ಸ್ ನೀರು ಬೀಳುತ್ತಿದ್ದು, ಇದರಿಂದ ಸುತ್ತಮುತ್ತಲಿನ ನೂರಾರು ಎಕರೆ ಕೃಷಿ ಭೂಮಿಯ ಬೆಳೆ ನಾಶವಾಗಿದ್ದ ಹಿನ್ನಲೆಯಲ್ಲಿ ಬುಧವಾರ ವಿಜ್ಞಾನಿಗಳ ತಂಡ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮಡೆನೂರು ಕೃಷಿ ವಿಜ್ಞಾನ ಕೇಂದ್ರದ ಡಾ।।ಪ್ರಕಾಶ್ ಮತ್ತು ಅವರ ತಂಡದ ಸದಸ್ಯರು ಕಾರ್ಖಾನೆಯ ಸುತ್ತಮುತ್ತಲಿನ ಮಣ್ಣು ಮತ್ತು ಕಲುಷಿತಗೊಂಡಿರುವ ನೀರನ್ನು ಪರಿಶೀಲಿಸಿತು. ಕಳೆದ ಹಲವಾರು ವರ್ಷಗಳಿಂದ ಕಾರ್ಖಾನೆಯ ನೀರು ಕೆರೆಗೆ ಹರಿದು ನೀರು ಕಲುಷಿತವಾಗಿದೆ. ಕೆರೆಯ ನೀರನ್ನು ಬಳಸುತ್ತಿರುವುದರಿಂದ ಕೃಷಿ ಜಮೀನು ಕೂಡ ಹಾಳಾಗಿತ್ತಲ್ಲದೆ, ಬೆಳೆ ನಾಶ ಪ್ರತಿಭಟನೆ ನಡೆಸಿದ್ದರು. ಇದನ್ನು ಮನಗಂಡ ಕೃಷಿ ವಿಜ್ಞಾನಿಗಳು ತಂಡ ಅಲ್ಲಿಗೆ ತೆರಳಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ।।ಪ್ರಕಾಶ್, ಭೂಮಿಯಲ್ಲಿ ಉಪ್ಪಿನ ಅಂಶ ಕಂಡು ಬಂದಿದೆ. ಹಾಗಾಗಿ ಬೆಳೆ ನಾಶವಾಗಿರುವುದು ಪರಿಶೀಲನೆಯಿಂದ ತಿಳಿದು ಬಂದಿದೆ ಎಂದು ಸ್ಪಷ್ಟಪಡಿಸಿದರು. ವಿಜ್ಞಾನಿಗಳ ತಂಡದೊಂದಿಗೆ ಚರ್ಚೆ ನಡೆಸಿದ ಕೊಕ್ಕನಘಟ್ಟ ಸುತ್ತಮುತ್ತಲ ಗ್ರಾಮಸ್ಥರು, ಹಲವಾರು ವರ್ಷಗಳಿಂದ ತೊಂದರೆಗೊಳಗಾಗಿದ್ದೇವೆ. ಕಾರ್ಖಾನೆಯ ಕಲುಷಿತ ನೀರು ತಮ್ಮ ಬದುಕನ್ನೇ ಮೂರಾಬಟ್ಟೆಯಾಗಿಸಿದೆ ಎಂದರು. ಸೂಕ್ತ ಪರಿಶೀಲನೆನಡೆಸಿ,ಸರ್ಕಾರಕ್ಕೆವರದಿ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿ ದರಲ್ಲದೆ, ನಷ್ಟ ಹೊಂದಿರುವ ತಮಗೆ ಪರಿಹಾರ ನೀಡುವಂತೆಯೂ ಒತ್ತಾಯಿಸಿದರು.

ದೇವರಾಜ್ ಅಕ್ರಮ ಆಸ್ತಿ ಮೌಲ್ಯ ೯೬.೨೬ ಲಕ್ಷ ರೂ.
ಹಾಸನ : ಬೆಂಗಳೂರಿನ ಪರಿಶಿಷ್ಟ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಾಸನ ಮೂಲದ ಎಸ್.ಟಿ. ದೇವ ರಾಜ್ ಅವರ ಬೆಂಗಳೂರು, ಮೈಸೂರು, ಹಾಸನ ಹಾಗೂ ಹೊಳೆನರಸೀ ಪುರ ನಿವಾಸಗಳ ಮೇಲೆ ಮಂಗಳವಾರ ನಡೆದ ಲೋಕಾಯುಕ್ತ ದಾಳಿಯಲ್ಲಿ ಒಟ್ಟು ೯೦.೨೬ ಲಕ್ಷ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ.ಎನ್.ಸ್ವಾಮಿ ತಿಳಿಸಿದ್ದಾರೆ. ಆದಾಯಕ್ಕಿಂತ ಹೆಚ್ಚುವರಿಯಾಗಿ ೧,೩೩,೬೮,೨೮೫ ರೂ. ಮೌಲ್ಯದ ಅಕ್ರಮ ಚರಾಚಿರಾಸ್ತಿ ಹೊಂದಿದ್ದಾರೆ ಎಂಬ ಗುಪ್ತ ಮಾಹಿತಿ ಮೇರೆಗೆ ಈ ದಾಳಿ ನಡೆಸ ಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿ ರುವ ಅವರು, ಆಸ್ತಿಗಳ ಮೌಲ್ಯವನ್ನು ತಿಳಿಸಿದ್ದಾರೆ. ಮೈಸೂರು ಗಂಗೋತ್ರಿ ಬಡಾವಣೆಯ ಮನೆಯಲ್ಲಿ ೨೯ ಲಕ್ಷ ರೂ., ಹೊಳೆನರಸೀ ಪುರ ತಾಲ್ಲೂಕು ಚಿಕ್ಕನಹಳ್ಳಿ ಗ್ರಾಮದ ತೋಟದ ಮನೆ ಹಾಗೂ ಮತ್ತೊಂದು ಮನೆಯಲ್ಲಿ ೩೦ ಲಕ್ಷ ರೂ., ಬೆಂಗಳೂರು ನಗರದ ಬಾಡಿಗೆ ಮನೆಯಲ್ಲಿ ೧೩ ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ಹಾಗೂ ಇತರೆ ಬೆಲೆ ಬಾಳುವ ಸಾಮಗ್ರಿಗಳು ದೊರೆತಿವೆ ಎಂದು ಅವರು ಹೇಳಿದ್ದಾರೆ. ನಗರದಲ್ಲಿ ೨೦೦೫-೦೬ನೇ ಸಾಲಿನಲ್ಲಿ ೮ ಲಕ್ಷ ರೂ. ಮೌಲ್ಯದ ಮನೆ ಕಟ್ಟಿಸಿದ್ದು, ೩೦ಗಿ೪೦ ಅಳತೆ ನಿವೇಶನದಲ್ಲಿ ಕಟ್ಟಲಾದ ಮನೆಯನ್ನು ೬ ಲಕ್ಷ ರೂ.ಗೆ ಖರೀದಿಸಿದ್ದಾರೆ. ಕುವೆಂಪುನಗರದಲ್ಲಿ ಪತ್ನಿ ಉಮಾ ಮಹೇಶ್ವರಿ ಹೆಸರಿನಲ್ಲಿ ೧,೮೬,೦೦೦ ರೂ. ಮೌಲ್ಯದ ಮನೆ ಖರೀದಿಸಿದ್ದಾರೆ. ನಗರದ ಸತ್ಯವಂಗಲದಲ್ಲಿ ೮೫ಗಿ೫೦ ಅಳತೆಯ ನಿವೇಶನವನ್ನು ೨.೪ ಲಕ್ಷ ರೂ.ಗಳಿಗೆ ಪತ್ನಿಯ ಹೆಸರಿನಲ್ಲಿ ಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.